Product SiteDocumentation Site

Red Hat Enterprise Linux 5.5

ಬಿಡುಗಡೆ ಟಿಪ್ಪಣಿಗಳು

ಬಿಡುಗಡೆ ಟಿಪ್ಪಣಿಗಳು

Logo

Red Hat ಇಂಜಿನಿಯರಿಂಗ್ ಕಂಟೆಂಟ್ ಸರ್ವಿಸಸ್

Legal Notice

Copyright © 2010 Red Hat.
The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
All other trademarks are the property of their respective owners.


1801 Varsity Drive
RaleighNC 27606-2072 USA
Phone: +1 919 754 3700
Phone: 888 733 4281
Fax: +1 919 754 3701
PO Box 13588 Research Triangle ParkNC 27709 USA

ಸಾರಾಂಶ
Red Hat ಎಂಟರ್ಪ್ರೈಸ್ ಲಿನಕ್ಸಿನ ಸಣ್ಣ ಬಿಡುಗಡೆಯಲ್ಲಿ ಪ್ರತ್ಯೇಕ ಸುಧಾರಣೆ, ಸುರಕ್ಷತೆ ಹಾಗು ದೋಷ ಪರಿಹಾರದ ಎರಾಟದ ಒಂದು ಒಗ್ಗೂಡಿಕೆಯಾಗಿರುತ್ತದೆ. ಈ ಬಿಡುಗಡೆಗಾಗಿನ Red Hat ಎಂಟರ್ಪ್ರೈಸ್ ಲಿನಕ್ಸ್ 5 ಕಾರ್ಯವ್ಯವಸ್ಥೆ ಹಾಗು ಅದಕ್ಕೆ ಸಂಬಂಧಿಸಿದ ಅನ್ವಯಗಳ ಬಗೆಗಿನ ಮಾಹಿತಿಯನ್ನು Red Hat ಎಂಟರ್ಪ್ರೈಸ್ ಲಿನಕ್ಸ್ 5.5 ರ ಬಿಡುಗಡೆ ಟಿಪ್ಪಣಿಗಳ ದಸ್ತಾವೇಜಿನಲ್ಲಿ ನೀಡಲಾಗಿದೆ. ಈ ಚಿಕ್ಕ ಬಿಡುಗಡೆಯಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ಬಗೆಗಿನ ಸವಿವರವಾದ ಮಾಹಿತಿಯನ್ನು ತಾಂತ್ರಿಕ ಟಿಪ್ಪಣಿಗಳಲ್ಲಿ ಕಾಣಬಹುದಾಗಿದೆ.
Red Hat ಎಂಟರ್ಪ್ರೈಸ್ ಲಿನಕ್ಸ್ 5.5 ರ ಬಿಡುಗಡೆಯಲ್ಲಿ Intel Boxboro-EX ಪ್ಲಾಟ್‌ಫಾರ್ಮ್, AMD Magny-Cours ಸಂಸ್ಕಾರಕ ಹಾಗು IBM Power 7 ಸಂಸ್ಕಾರಕಕ್ಕೆ ಯಂತ್ರಾಂಶ ಶಕ್ತಗೊಳಿಕೆಯನ್ನು ಸೇರ್ಪಡಿಸಲಾಗಿದೆ. ಅನೇಕ 10 GigE SR-IOV ಕಾರ್ಡುಗಳಿಗೆ, ಹಾಗು ವರ್ಚುವಲ್ ಅತಿಥಿಗಳಿಗಾಗಿ ಸ್ವಯಂಚಾಲಿತವಾಗಿ ಹ್ಯೂಜ್‌ಪೇಜ್‌ಗಳನ್ನು ಬಳಸುವುದಕ್ಕೆ ಬೆಂಬಲವನ್ನು ಸೇರಿಸುವುದರೊಂದಿಗೆ ವರ್ಚುವಲೈಸೇಶನ್ ಅನ್ನು ಸುಧಾರಿಸಲಾಗಿದೆ. Microsoft Office 2007 ಫಿಲ್ಟರುಗಳು ಹಾಗು OpenOffice ಗಳ ನಡುವೆ ಮಾಹಿತಿ ವಿನಿಮಯ ಹಾಗು ಬಳಕೆಯನ್ನು ಸುಧಾರಿಸುವಂತಹ ಅಪ್‌ಡೇಟ್‌ಗಳು, Windows 7 ಕ್ಕೆ ಹೊಂದಿಕೊಳ್ಳುವಂತ Samba ಹಾಗು Microsoft ಆಧರಿತವಾದ PXE ಸೇವೆಗಳನ್ನು ಬಳಸಿಕೊಳ್ಳುವ ವರ್ಚುವಲ್ ಗಣಕಗಳಿಗಾಗಿನ ಬೂಟ್ ಬೆಂಬಲವನ್ನು ಸೇರಿಸಲಾಗಿದೆ.

1. ಅನುಸ್ಥಾಪನೆ

Red Hat ಎಂಟರ್ಪ್ರೈಸ್‌ ಲಿನಕ್ಸ್ 5.5 ರಲ್ಲಿ ವ್ಯವಸ್ಥೆಯ ಅನುಸ್ಥಾಪಕವನ್ನು (anaconda) ಉತ್ತಮಗೊಳಿಸಲು ಹಲವಾರು ದೋಷಪರಿಹಾರಗಳನ್ನು ಸೇರ್ಪಡಿಸಲಾಗಿದೆ.
NFS ಹೆಚ್ಚುವರಿ ನೆಟ್‌ವರ್ಕ್ ಫೈಲ್ ಸಿಸ್ಟಮ್ (NFS) ಆರೋಹಣಾ ಆಯ್ಕೆಗಳನ್ನು ಸೂಚಿಸುವ ಸಾಮರ್ಥ್ಯವನ್ನು ಸೇರಿಸುವ ಮೂಲಕ ಸಂವಾದಾತ್ಮಕ ಅನುಸ್ಥಾಪಕವನ್ನು ಉತ್ತಮಗೊಳಿಸಲಾಗಿದೆ (BZ#493052). ಇಷ್ಟೆ ಅಲ್ಲದೆ, ಫೈಲ್ ಟ್ರಾನ್ಸ್‌ಪೋರ್ಟ್ ಪ್ರೊಟೊಕಾಲ್ (FTP) ಪರಿಚಾರಕಗಳಲ್ಲಿ ಗುಪ್ತಪದದಿಂದ ಸಂರಕ್ಷಿಸಿ ಇರಿಸಲಾದಂತಹ ಅನುಸ್ಥಾಪನಾ ಆಕರಗಳನ್ನು (ಉದಾ. ಕಿಕ್‌ಸ್ಟಾರ್ಟ್ ಕಡತಗಳು) ಈಗ ಅನುಸ್ಥಾಪನೆಯ ಸಮಯದಲ್ಲಿ ಪಡೆದುಕೊಳ್ಳಬಹುದಾಗಿದೆ(BZ#505424).
ಕಿಕ್‌ಸ್ಟಾರ್ಟ್
ಒಂದು Red Hat ಎಂಟರ್ಪ್ರೈಸ್‌ ಲಿನಕ್ಸ್ ಅನುಸ್ಥಾಪನೆಯು ಸ್ವಯಂಚಾಲಿತವಾಗಿ ನಡೆಯುವಂತೆ ಕಿಕ್‌ಸ್ಟಾರ್ಟ್ ನೆರವಾಗುತ್ತದೆ. ಕಿಕ್‌ಸ್ಟಾರ್ಟ್ ಅನ್ನು ಬಳಸಿಕೊಂಡು, ಒಬ್ಬ ಗಣಕ ವ್ಯವಸ್ಥಾಪಕನು ಸಾಮಾನ್ಯವಾಗಿ ಅನುಸ್ಥಾಪನೆಯಲ್ಲಿ ಕೇಳಲಾಗುವ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿರುವ ಒಂದು ಕಡತವನ್ನು ರಚಿಸಬಹುದು.
ಕಿಕ್‌ಸ್ಟಾರ್ಟ್ ದೋಷನಿದಾನ ಹಾಗು ದೋಷ ವರದಿ ಮಾಡುವಿಕೆಯನ್ನು ಉತ್ತಮಗೊಳಿಸಲಾಗಿದೆ. ಅನುಸ್ಥಾಪಕವು ಈಗ ದೋಷನಿದಾನದ ಸಮಯದಲ್ಲಿಕಿಕ್‌ಸ್ಟಾರ್ಟ್ ಸ್ಕ್ರಿಪ್ಟ್‌ಲೆಟ್‌ಗಳನ್ನು ಇರಿಸಿಕೊಳ್ಳುತ್ತದೆ, standard output (stdout)ನ standard error (stderr) ಸ್ಟ್ರೀಮ್‌ಗಳ ದಾಖಲೆಯನ್ನು ಇರಿಸಿಕೊಳ್ಳುತ್ತದೆ, ಹಾಗು ದೋಷ ಸಂದೇಶಗಳನ್ನು anaconda.log ಗೆ ದಾಖಲಿಸುತ್ತದೆ (BZ#510636).
ಕಿಕ್‌ಸ್ಟಾರ್ಟ್ ಅನುಸ್ಥಾಪನೆಯ ಸಮಯದಲ್ಲಿ ಹೇಗೆ ಪ್ರತ್ಯೇಕೆ ಪ್ಯಾಕೇಜುಗಳನ್ನು ಹೊರತುಪಡಿಸಲು ಸಾಧ್ಯವಿತ್ತೊ ಹಾಗೆಯೆ ಈಗ ಪ್ಯಾಕೇಜು ಗುಂಪುಗಳನ್ನೂ ಸಹ ಹೊರತುಪಡಿಸಬಹುದಾಗಿರುತ್ತದೆ (BZ#558516). ಅಷ್ಟೆ ಅಲ್ಲದೆ, bootloader ಆಜ್ಞೆಯು ಈಗ --hvargs ನಿಯತಾಂಕವನ್ನು ಬೆಂಬಲಿಸುತ್ತದೆ, ಇದು Xen ಹೈಪರ್ವೈಸರ್ ಆರ್ಗ್ಯುಮೆಂಟ್‌ಗಳನ್ನು ಅನುಸ್ಥಾಪನೆಯ ಸಮಯದಲ್ಲಿ ಸೂಚಿಸಲು ಅನುವು ಮಾಡಿಕೊಡುತ್ತದೆ (BZ#501438).
ಈ ಹಿಂದೆ, ಎಲ್ಲಾ ಪ್ಯಾಕೇಜುಗಳನ್ನು ಆಯ್ಕೆ ಮಾಡಲು ಕಿಕ್‌ಸ್ಟಾರ್ಟ್ ಎರಡು ಆಯ್ಕೆಗಳನ್ನು ಒದಗಿಸುತ್ತಿತ್ತು, ಅವುಗಳೆಂದರೆ @Everything ಹಾಗು * (ವೈಲ್ಡ್‌ಕಾರ್ಡ್). Red Hat ಎಂಟರ್ಪ್ರೈಸ್‌ ಲಿನಕ್ಸ್ 5.5 ರಿಂದ, ಈ ಎರಡೂ ಆಯ್ಕೆಗಳನ್ನು ತೆಗೆದು ಹಾಕಲಾಗಿದೆ. ಅಸಮಂಸಜಸತೆಯನ್ನು ಪ್ಯಾಕೇಜುಗಳ ನಿರಾಕರಣೆಯನ್ನು ಸೇರಿಸದ ಹೊರತು ಎಲ್ಲವನ್ನೂ ಆಯ್ಕೆ ಮಾಡು ಎನ್ನುವು ಆಯ್ಕೆಯನ್ನು ಬಳಸುವುದು ವಿಫಲಗೊಳ್ಳುತ್ತದೆ. ಆದ್ದರಿಂದ, ಅಸಮಂಜಸ ಪ್ಯಾಕೇಜುಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಪ್ಯಾಕೇಜುಗಳನ್ನು ಅನುಸ್ಥಾಪಿಸಲು, ಕಿಕ್‌ಸ್ಟಾರ್ಟ್ ಕಡತವು ಇದನ್ನು ಹೊಂದಿರಬೇಕು:
 %packages @Everything -@Conflicts
Red Hat ಎಂಟರ್ಪ್ರೈಸ್ ಲಿನಕ್ಸ್ 5.5 ರಲ್ಲಿ ಈ ಕೆಳಗಿನ ಹೊಸ ಪ್ಯಾಕೇಜ್ ಸೆಟ್‌ಗಳನ್ನು ಸೇರ್ಪಡಿಸಲಾಗಿದೆ:samba3x, freeradius2, postgres84. ಈ ಪ್ಯಾಕೇಜ್‌ ಸೆಟ್‌ಗಳು ವ್ಯವಸ್ಥೆಯನ್ನು ಅನುಸ್ಥಾಪಿಸುವಾಗ ಕಿಕ್‌ಸ್ಟಾರ್ಟ್ ಮೂಲಕ ಅಥವ ಈಗಾಗಲೆ ವ್ಯವಸ್ಥೆಯನ್ನು ಹೊಂದಿರುವವರಿಗೆ yum ಮೂಲಕ ಲಭ್ಯವಿರುತ್ತದೆ.
ಯಂತ್ರಾಂಶ ಬೆಂಬಲ
ಈ ಕೆಳಗಿನ ಸಾಧನ ಚಾಲಕಗಳಿಗೆ ಈಗ ಅನುಸ್ಥಾಪನೆಯ ಸಮಯದಲ್ಲಿ ಬೆಂಬಲಿತವಾಗಿರುತ್ತವೆ:
  • PMC Sierra MaxRAID ಕಂಟ್ರೋಲರ್ ಅಡಾಪ್ಟರುಗಳಿಗಾಗಿನ pmcraid ಚಾಲಕ (BZ#532777)
  • Power6 Virtual FC ಸಾಧನಗಳಿಗಾಗಿನ ibmvfs ಚಾಲಕ (BZ#512237).
  • ಹೋಸ್ಟ್ ಬಸ್ ಅಡಾಪ್ಟರುಗಳಿಗಾಗಿರುವ Brocade ಫೈಬರ್ ಚಾನಲ್‌ಗಾಗಿನ bfa ಚಾಲಕ (BZ#475707)
  • ServerEngines BladeEngine 2 Open iSCSI ಗಾಗಿನ be2iscsi ಚಾಲಕ (BZ#529442).

ಸೂಚನೆ

ಅನುಸ್ಥಾಪನೆಗಾಗಿನ ವಿವರವಾದ ಮಾಹಿತಿಗಾಗಿ ಅನುಸ್ಥಾಪನಾ ಮಾರ್ಗದರ್ಶಿಯು Red Hat ಎಂಟರ್ಪ್ರೈಸ್ ಲಿನಕ್ಸ್ 5 ಅನ್ನು ಹೇಗೆ ಅನುಸ್ಥಾಪಿಸುವುದು ಎನ್ನುವ ಮಾಹಿತಿಯನ್ನು ನೀಡುತ್ತದೆ.

2. ವರ್ಚುವಲೈಸೇಶನ್

Red Hat ಎಂಟರ್ಪ್ರೈಸ್‌ ಲಿನಕ್ಸ್ 5.5 ವರ್ಚುವಲೈಸೇಶನ್‌ಗೆ ಹಲವಾರು ಅಪ್‌ಡೇಟ್‌ಗಳನ್ನು ಒದಗಿಸುತ್ತದೆ. ಎಲ್ಲಾ ವರ್ಚುವಲೈಸೇಶನ್‌ ಕುರಿತಾದ ಬದಲಾವಣೆಗಳ ಬಗೆಗಿನ ವಿವರವಾದ ಮಾಹಿತಿಯನ್ನು ತಾಂತ್ರಿಕ ಟಿಪ್ಪಣಿಗಳು ವಿಭಾಗದಲ್ಲಿ ನೋಡಬಹುದಾಗಿದೆ.

ಸೂಚನೆ

KVM ಆಧರಿತವಾದ ವರ್ಚುವಲ್ ಅತಿಥಿಗಳನ್ನು ಕ್ಲಸ್ಟರ್ ಸೂಟ್‌ ಬಳಸಿಕೊಂಡು ನಿರ್ವಹಿಸುವುದು ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ.

SPICE

Red Hat ಎಂಟರ್ಪ್ರೈಸ್‌ ಲಿನಕ್ಸ್ 5.5 ರಲ್ಲಿ ಸ್ವತಂತ್ರ ಗಣಕ ಪರಿಸರಗಳಿಗಾಗಿನ ಸರಳ ಪ್ರೊಟೊಕಾಲ್ (SPICE) ದೂರಸ್ಥ ಪ್ರದರ್ಶಕ ಪ್ರೊಟೊಕಾಲ್‌ಗೆ ಕ್ರಿಯಾತ್ಮಕತೆಯನ್ನು ಒದಗಿಸುವ ಘಟಕಗಳನ್ನು ಸೇರಿಸಲಾಗಿದೆ. ಈ ಪ್ರೊಟೊಕಾಲ್‌ಗಳನ್ನು Red Hat ಎಂಟರ್ಪ್ರೈಸ್ ವರ್ಚುವಲೈಸೇಶನ್ ಉತ್ಪನ್ನಗಳೊಂದಿಗೆ ಬಳಸಬಹುದಾಗಿರುತ್ತದೆ ಹಾಗು ಹಾಗು ಇವು ಯಾವುದೆ ಸ್ಥಿರ ABI ಅನ್ನು ಹೊಂದಿರುವ ಖಾತ್ರಿ ಇರುವುದಿಲ್ಲ. Red Hat ಎಂಟರ್ಪ್ರೈಸ್ ವರ್ಚುವಲೈಸೇಶನ್ ಉತ್ಪನ್ನಗಳೊಂದಿಗೆ ಹೊಂದಿಕೊಳ್ಳುವಂತೆ ಈ ಘಟಕಗಳನ್ನು ಅಪ್‌ಡೇಟ್ ಮಾಡಲಾಗಿರುತ್ತದೆ. ಭವಿಷ್ಯದ ಬಿಡುಗಡೆಗಳಿಗೆ ವರ್ಗಾವಣೆ ಹೊಂದಲು ಪ್ರತಿ ವ್ಯವಸ್ಥೆಯ ಆಧಾರದಲ್ಲಿ ಕೈಯಾರೆ ಇದನ್ನು ನಿರ್ವಹಿಸುವ ಅಗತ್ಯವಿರಬಹುದು.
PCI ಪಾಸ್‌ತ್ರೂ ಸುಧಾರಣೆಗಳು
PCI ಸಾಧನಗಳು ಅತಿಥಿ ಕಾರ್ಯವ್ಯವಸ್ಥೆಗೆ ಭೌತಿಕವಾಗಿ ಜೋಡಿಸಲ್ಪಟ್ಟಿವೆ ಎಂದು ಕಾಣಿಸಿಕೊಳ್ಳುವಂತೆ PCI ಪಾಸ್‌ತ್ರೂ ಮಾಡುತ್ತವೆ. KVM ಹಾಗು Xen ಹೈಪರ್ವೈಸರುಗಳೆರಡೂ ಸಹ PCI ಸಾಧನಗಳನ್ನು ಆತಿಥೇಯ ವ್ಯವಸ್ಥೆಯಲ್ಲಿ ವರ್ಚುವಲೈಸ್ಡ್ ಅತಿಥಿಗೆ ಜೋಡಿಸುವುದನ್ನು ಬೆಂಬಲಿಸುತ್ತವೆ.
PCI ಪಾಸ್‌ತ್ರೂಗಳಿಗೆ ನೆರವಾಗುವ AMD ಇನ್‌ಪುಟ್/ಔಟ್‌ಪುಟ್ ಮೆಮೊರಿ ನಿರ್ವಹಣಾ ಘಟಕ (IOMMU) ಕರ್ನಲ್ ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. ವ್ಯವಸ್ಥೆಯ ನಿರ್ವಹಣೆಯ ಮನವಿಯನ್ನು ಅಸಮರ್ಪಕವಾಗಿ ನಿಭಾಯಿಸುತ್ತಿದ್ದಂತಹ ಒಂದು ಸಮಸ್ಯೆಯನ್ನು ಈ ಅಪ್‌ಡೇಟ್ ಸರಿಪಡಿಸುತ್ತದೆ. (BZ#531469)
KVM ಹೈಪರ್ವೈಸರಿನಲ್ಲಿ Intel VT-d ವಿಸ್ತರಣೆಗಳನ್ನು ಬಳಸಿಕೊಳ್ಳುವ PCI ಪಾಸ್‌ತ್ರೂಗೆ ಬೆಂಬಲವನ್ನು ಉತ್ತಮಗೊಳಿಸಲಾಗಿದೆ. ಸಾಧನಗಳನ್ನು(ಭೌತಿಕ ಅಥವ ವಾಸ್ತವ) ಈಗ ಅತಿಥಿಯ ಚಾಲನೆಯ ಸಮಯದಲ್ಲಿ ಸ್ಥಗಿತಗೊಳಿಸಬಹುದಾಗಿದೆ ಹಾಗು ನಿಯೋಜಿಸದೆ ಇರುವಂತೆ ಮಾಡಬಹುದಾಗಿದೆ, ಇದರಿಂದಾಗಿ ಸಾಧನಗಳು ಇನ್ನೊಂದು ಅತಿಥಿಗೆ ಮರಳಿ ನಿಯೋಜಿಸಬಹುದಾಗಿರುತ್ತದೆ. ಈ ಮರು ನಿಯೋಜನೆಯನ್ನು ಲೈವ್ ಆಗಿಯೂ ಸಹ ನಡೆಸಬಹುದಾಗಿದೆ (BZ#516811). ಅಷ್ಟೆ ಅಲ್ಲದೆ, 1:1 ಮ್ಯಾಪಿಂಗ್ ಕಾರ್ಯಕ್ಷಮತೆಯನ್ನೂ ಸಹ ಸುಧಾರಿಸಲಾಗಿದೆ (BZ#518103).

ಸೂಚನೆ

ವರ್ಚುವಲೈಸೇಶನ್ ಬಗೆಗಿನ ವಿವರವಾದ ಮಾಹಿತಿಗಾಗಿ, ವರ್ಚುವಲೈಸೇಶನ್ ಮಾರ್ಗದರ್ಶಿಯು Red Hat ಎಂಟರ್ಪ್ರೈಸ್‌ ಲಿನಕ್ಸ್‌ನಲ್ಲಿನ ವರ್ಚುವಲೈಸೇಶನ್ ಕುರಿತಾದ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.
ಹ್ಯೂಜ್‌ಪೇಜ್‌ಗಳ ಬೆಂಬಲ
hugetlbfs (HugePages) ಅನ್ನು ಶಕ್ತಗೊಳಿಸಲು libvirt ಹೊಸ ನಿಯಮಗಳು ಲಭ್ಯವಿವೆ. ಒಂದು ವ್ಯವಸ್ಥೆಯನ್ನು ಹ್ಯೂಜ್‌ಪೇಜ್‌ಗಳನ್ನು ಬಳಸಿಕೊಂಡು ಸಂರಚಿಸಿದಾಗ, libvirt ಸ್ವಯಂಚಾಲಿತವಾಗಿ ಮೆಮೊರಿಯನ್ನು hugetlbfs ಇಂದ ವರ್ಚುವಲ್ ಅತಿಥಿ ಮೆಮೊರಿಗೆ ಮರಳಿ ನಿಯೋಜಿಸುತ್ತದೆ. ವಿಸ್ತರಿಸಲಾದ ಪೇಜ್ ಟೇಬಲ್‌ಗಳು ಹಾಗು ನೆಸ್ಟ್ ಮಾಡಲಾದ ಪೇಜ್ ಟೇಬಲ್‌ಗಳನ್ನು ಯಂತ್ರಾಂಶದೊಂದಿಗೆ ಒಗ್ಗೂಡಿಸುವುದರಿಂದ, ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಕಾಣಬಹುದು. (BZ#518099)

3. ಕರ್ನಲ್

3.1. ಕರ್ನಲ್ ಪ್ಲಾಟ್‌ಫಾರ್ಮ್ ಶಕ್ತಗೊಳಿಕೆ

ಈ ಬಿಡುಗಡೆಯಲ್ಲಿ Intel ನ ಹೊಸ ಪ್ಲಾಟ್‌ಫಾರ್ಮಗಳಾದಂತಹ, Boxboro-EX ಹಾಗು Boxboro-MC ಅನ್ನು, AMD ಯ ಹೊಸ ಸಂಸ್ಕಾರಕ ಪಂಗಡವಾದ Magny-Cours ಮತ್ತು IBM ನ Power7 ಸಂಸ್ಕಾರಕವನ್ನು ಬೆಂಬಲವನ್ನು ಸೇರಿಸಲಾಗಿದೆ.

3.2. ಸಾಮಾನ್ಯ ಕರ್ನಲ್ ಸವಲತ್ತುಗಳು

ತಡೆಹಿಡಿಯಲಾಗದಂತಹ ಜಡ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ ಕರ್ನಲ್ ಕಾರ್ಯಗಳನ್ನು ಪತ್ತೆ ಮಾಡುವುದು
ಕೆಲವು ಸಂದರ್ಭಗಳಲ್ಲಿ, ಕರ್ನಲ್‌ನಲ್ಲಿನ ಕೆಲವು ಕಾರ್ಯಗಳು ತಡೆಹಿಡಿಯಲಾಗದಂತಹ ಜಡ ಸ್ಥಿತಿಯನ್ನು (D-ಸ್ಥಿತಿ) ತಲುಪುತ್ತದೆ, ಇದರಿಂದಾಗಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದು ಅಸಾಧ್ಯವಾಗುತ್ತದೆ. ಈ ಅಪ್‌ಡೇಟ್‌ನಿಂದಾಗಿ, Detect Hung Task(ಜಡಗೊಂಡ ಕಾರ್ಯವನ್ನು ಪತ್ತೆಮಾಡು) ಕರ್ನಲ್ ತ್ರೆಡ್ ಅನ್ನು ಸೇರಿಸಲಾಗಿದೆ, ಇದರಿಂದಾಗಿ ಶಾಶ್ವತವಾಗಿ D-ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ ಕಾರ್ಯಗಳನ್ನು ಪತ್ತೆ ಮಾಡಲು ಸಾಧ್ಯವಿರುತ್ತದೆ.
ಹೊಸ ಸೌಕರ್ಯವನ್ನು CONFIG_DETECT_HUNG_TASK ಕರ್ನಲ್ ಫ್ಲಾಗ್‌ನಿಂದ ನಿಯಂತ್ರಿಸಲಾಗುತ್ತದೆ. "y" ಗೆ ಬದಲಾಯಿಸಿದಲ್ಲಿ D-ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ ಕಾರ್ಯಗಳನ್ನು ಪತ್ತೆ ಮಾಡಲಾಗುತ್ತದೆ; n ಗೆ ಬದಲಾಯಿಸಿದಲ್ಲಿ ಅದು ಆಫ್‌ ಆಗಿರುತ್ತದೆ. CONFIG_DETECT_HUNG_TASK ಫ್ಲಾಗ್‌ನ ಪೂರ್ವನಿಯೋಜಿತ ಮೌಲ್ಯವು y ಆಗಿರುತ್ತದೆ.
ಜೊತೆಗೆ, CONFIG_BOOTPARAM_HUNG_TASK_PANIC ಫ್ಲಾಗ್ ಅನ್ನು ಸೇರಿಸಲಾಗಿದೆ. ಇದನ್ನು y ಗೆ ಬದಲಾಯಿಸಿದಲ್ಲಿ, D-ಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡ ಕಾರ್ಯವು ಪತ್ತೆಯಾದಲ್ಲಿ ಕರ್ನಲ್ ಪ್ಯಾನಿಕ್ ಅನ್ನು ತೋರಿಸಲಾಗುತ್ತದೆ. CONFIG_BOOTPARAM_HUNG_TASK_PANIC ಫ್ಲಾಗ್‌ನ ಪೂರ್ವನಿಯೋಜಿತ ಮೌಲ್ಯವು n ಆಗಿರುತ್ತದೆ.
ಸಹಿ ಮಾಡಲಾದ s390 ಕರ್ನಲ್ ಘಟಕಗಳು
Red Hat ಎಂಟರ್ಪ್ರೈಸ್‌ ಲಿನಕ್ಸ್ 5.5 ರಿಂದ ಆರಂಭಗೊಂಡು, ಎಲ್ಲಾ s390 ಕರ್ನಲ್ ಘಟಕಗಳು ಇನ್ನು ಮುಂದೆ ಸಹಿ ಮಾಡಲ್ಪಟ್ಟಿರುತ್ತವೆ. BZ#483665

4. ಸಾಧನ ಚಾಲಕಗಳು

HP iLO/iLO2 ನಿರ್ವಹಣಾ ಸಂಸ್ಕಾರಕಗಳಿಗಾಗಿನ hpilo ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
ಅಡ್ವಾನ್ಸಡ್ ಲಿನಕ್ಸ್ ಸೌಂಡ್ ಆರ್ಕಿಟೆಕ್ಚರ್ (ALSA) ಅನ್ನು ಅಪ್‌ಡೇಟ್ ಮಾಡಲಾಗಿದೆ — ಇದು ಹೈಡೆಫಿನೇಶನ್ ಆಡಿಯೊ(HDA)ಗೆ ಬೆಂಬಲವನ್ನು ಒದಗಿಸುತ್ತದೆ. (BZ#525390).
iic-ಬಸ್‌ ಸಂಪರ್ಕಸಾಧನಕ್ಕಾಗಿನ i2c ಸಾಧನ ಚಾಲಕವನ್ನು SB900 SMBus ನಿಯಂತ್ರಕಕ್ಕೆ ಬೆಂಬಲ ಒದಗಿಸುವಂತೆ ಅಪ್‌ಡೇಟ್ ಮಾಡಲಾಗಿದೆ. (BZ#516623)
Mellanox ConnectX HCA InfiniBand ಗಾಗಿನ mlx4 ಚಾಲಕವನ್ನು ಆವೃತ್ತಿ 1.4.1 ಗೆ ಅಪ್‌ಡೇಟ್ ಮಾಡಲಾಗಿದೆ(BZ#514147 BZ#500346)

4.1. ಜಾಲಬಂಧ ಸಾಧನ ಚಾಲಕಗಳು

ವೈರ್ಲೆಟ್ ಮರುಬೇಸ್
Red Hat ಎಂಟರ್ಪ್ರೈಸ್ ಲಿನಕ್ಸ್ 5.5 ರಲ್ಲಿನ ಕರ್ನಲ್‌ನಲ್ಲಿ ವೈರ್ಲೆಸ್ ಚಾಲಕಗಳು ಹಾಗು ಉಪವ್ಯವಸ್ಥೆಗಳಿಗಾಗಿ ಪ್ರಮುಖ ಅಪ್‌ಡೇಟ್‌ಗಳನ್ನು ಹೊಂದಿದೆ.
Intel ವೈರ್ಲೆಸ್‌ ಜಾಲಬಂಧ ಅಡಾಪ್ಟರುಗಳಿಗಾಗಿನ iwlwifi ಚಾಲಕಗಳನ್ನು ಅಪ್‌ಡೇಟ್ ಮಾಡಲಾಗಿದೆ. ಈ ಯಂತ್ರಾಂಶದ ಸಾಲಿನಲ್ಲಿ ಬರುವ ಸಾಧನಗಳು 802.11a, 802.11b, 802.11g, ಹಾಗು 802.11n ವೈರ್ಲೆಸ್ ಪ್ರೊಟೊಕಾಲ್‌ಗಳನ್ನು ಬೆಂಬಲಿಸುತ್ತವೆ. ಈ ಅಪ್‌ಡೇಟ್‌ನಿಂದಾಗಿ iwl6000 ಹಾಗು iwl1000 ಸಾಧನಗಳಿಗಾಗಿ ಹೊಸದಾಗಿ, ಹಾಗು iwl5000, iwl4965 ಮತ್ತು iwl3945 ಸಾಧನಗಳಿಗೆ ಹೆಚ್ಚಿನ ಬೆಂಬಲವನ್ನು ಒದಗಿಸುತ್ತದೆ.
ವೈರ್ಲೆಸ್‌ ಸಾಧನಗಳಿಗಾಗಿನ rt2x00 ಚಾಲಕಗಳನ್ನು ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್‌ನಿಂದಾಗಿ Ralink rt2400pci, rt2500pci, rt2500usb, rt61pciಹಾಗು rt73usb ಚಿಪ್‌ಸೆಟ್‌ಗಳ ಚಾಲಕಗಳನ್ನು, ಮತ್ತು rtl8180 ಹಾಗು rtl8187 Realtek ಚಿಪ್‌ಸೆಟ್‌ಗಳ ಚಾಲಕಗಳನ್ನು ಪುನಶ್ಚೇತನಗೊಳಿಸುತ್ತದೆ.
Atheros 802.11n wireless LAN ಅಡಾಪ್ಟರುಗಳಿಗಾಗಿನ ath9k ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
ಈ ಚಾಲಕಗಳ ಸವಲತ್ತುಗಳಿಗೆ ಬೆಂಬಲವನ್ನು ಒದಗಿಸಲು, mac80211 ಹಾಗು cfg80211 ಕರ್ನಲ್ ಉಪವ್ಯವಸ್ಥೆಯನ್ನು ಅಪ್‌ಡೇಟ್ ಮಾಡಲಾಗಿದೆ.
Solarflare ಚಾಲಕ
Red Hat Enterprise Linux 5.5, Solarflare ಚಾಲಕವನ್ನು (sfc) ಸೇರಿಸಲಾಗಿದೆ (BZ#448856)
Neterion's X3100 Series 10GbE PCIe ಚಾಲಕ
Neterion's X3100 Series 10GbE PCIe ಸಾಧನಗಳಿಗಾಗಿನ vxge ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ (BZ#453683).
ServerEngines BladeEngine2 10Gbps ಚಾಲಕ
ServerEngines BladeEngine2 10Gbps ಗಾಗಿನ be2net ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ (BZ#549460)
Cisco 10G ಎತರ್ನೆಟ್ ಚಾಲಕ
Cisco 10G ಇತರ್ನೆಟ್ ಸಾಧನಗಳಿಗಾಗಿನ enic ಚಾಲಕವನ್ನು ಆವೃತ್ತಿ 1.1.0.100 ಗೆ ಅಪ್‌ಡೇಟ್ ಮಾಡಲಾಗಿದೆ. (BZ#519086 BZ#550148)
QLogic 10 Gigabit PCI-E ಎತರ್ನೆಟ್ ಚಾಲಕ
QLogic 10 Gigabit PCI-E ಎತರ್ನೆಟ್ qlge ಚಾಲಕವನ್ನು ಆವೃತ್ತಿ 1.00.00.23 ಗೆ ಅಪ್‌ಡೇಟ್ ಮಾಡಲಾಗಿದೆ. (BZ#519453)
QLogic ಫೈಬರ್ ಚಾನಲ್ HBA ಚಾಲಕ
QLogic Fibre Channel HBA ಸಾಧನಗಳಿಗಾಗಿನ qla2xx ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. (BZ#542834 BZ#543057)
Broadcom Tigon3 ಎತರ್ನೆಟ್ ಚಾಲಕ
Broadcom Tigon3 ಎತರ್ನೆಟ್ ಸಾಧನಗಳಿಗಾಗಿನ tg3 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ . (BZ#515312)
Intel Gigabit ಎತರ್ನೆಟ್ ಜಾಲಬಂಧ ಚಾಲಕ
Intel Gigabit ಎತರ್ನೆಟ್ ಜಾಲಬಂಧ ಸಾಧನಗಳಿಗಾಗಿನ igb ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. (BZ#513710)
Intel 10 Gigabit PCI ಎಕ್ಸ್‌ಪ್ರೆಸ್ ಜಾಲಬಂಧ ಸಾಧನಗಳು
Intel 10 Gigabit PCI Express ಜಾಲಬಂಧ ಸಾಧನಗಳಿಗಾಗಿನ ixgbe ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. (BZ#513707, BZ#514306, BZ#516699)
Intel PRO/1000 ಜಾಲಬಂಧ ಸಾಧನಗಳು
Intel PRO/1000 ಜಾಲಬಂಧ ಸಾಧನಗಳಿಗಾಗಿನ e1000 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ (BZ#515524)
NetXen Multi port (1/10) Gigabit ಜಾಲಬಂಧ ಸಾಧನಗಳು
NetXen Multi port (1/10) Gigabit ಜಾಲಬಂಧ ಸಾಧನಗಳಿಗಾಗಿನ netxen ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. (BZ#542746)
Broadcom Everest ಜಾಲಬಂಧ ಸಾಧನಗಳು
Broadcom Everest ಜಾಲಬಂಧ ಸಾಧನಗಳಿಗಾಗಿನ bnx2x ಚಾಲಕವನ್ನು ಆವೃತ್ತಿ 1.52.1-5 ಗೆ ಅಪ್‌ಡೇಟ್ ಮಾಡಲಾಗಿದೆ.(BZ#515716, BZ#522600)
Broadcom NetXtreme II ಜಾಲಬಂಧ ಸಾಧನಗಳು
Broadcom NetXtreme II ಜಾಲಬಂಧ ಸಾಧನಗಳಿಗಾಗಿನ bnx2 ಚಾಲಕವನ್ನು ಆವೃತ್ತಿ 2.0.2 ಗೆ ಅಪ್‌ಡೇಟ್ ಮಾಡಲಾಗಿದೆ(BZ#517377)
Broadcom NetXtreme II iSCSI
Broadcom NetXtreme II iSCSI ಜಾಲಬಂಧ ಸಾಧನಗಳಿಗಾಗಿನ bnx2i ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. (BZ#516233)
RealTek 8169 ಎತರ್ನೆಟ್ ಸಾಧನಗಳು
RealTek 8169 ಎತರ್ನೆಟ್ ಸಾಧನಗಳಿಗಾಗಿನ r8169 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ. (BZ#514589)

4.2. ಶೇಖರಣಾ ಸಾಧನ ಚಾಲಕಗಳು

QLogic ಫೈಬರ್ ಚಾನಲ್ ಹೋಸ್ಟ್ ಬಸ್
QLogic Fibre Channel ಹೋಸ್ಟ್ ಬಸ್ ಅಡಾಪ್ಟರುಗಳಿಗಾಗಿನ qla2xxx ಚಾಲಕವನ್ನು ಆವೃತ್ತಿ 8.03.01.02.05.05-k ಗೆ ಅಪ್‌ಡೇಟ್ ಮಾಡಲಾಗಿದೆ. (BZ#519447)
HighPoint RocketRAID 3xxx/4xxx
HighPoint RocketRAID 3xxx/4xxx ನಿಯಂತ್ರಕಗಳಿಗಾಗಿ hptiop ಚಾಲಕವನ್ನು ಅಪ್‌ಡೇಟ್ ಮಾಡಲಾಗಿದ್ದು ಇದು RR44xx ಅಡಾಪ್ಟರುಗಳಿಗಾಗಿ ಬೆಂಬಲವನ್ನು ಸೇರಿಸುತ್ತದೆ. (BZ#519076)
Emulex ಫೈಬರ್ ಚಾನಲ್ ಹೋಸ್ಟ್ ಬಸ್
Emulex ಫೈಬರ್ ಚಾನಲ್ ಹೋಸ್ಟ್ ಬಸ್‌ಗಾಗಿನ lpfc ಚಾಲಕವನ್ನು ಆವೃತ್ತಿ 8.2.0.52 ಗೆ ಅಪ್‌ಡೇಟ್ ಮಾಡಲಾಗಿದೆ. (BZ#515272) BZ#549763
LSI SAS-2 ವರ್ಗಕ್ಕೆ ಸೇರಿಸದ ಅಡಾಪ್ಟರುಗಳು
LSI ಲಾಜಿಕ್‌ನ SAS-2 ಪಂಗಡದ ಅಡಾಪ್ಟರುಗಳನ್ನು ಬೆಂಬಲಿಸುವ mpt2sas ಎಂಬ ಚಾಲಕವನ್ನು ಆವೃತ್ತಿ 02.101.00.00 ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್‌ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ, ಅವುಗಳಲ್ಲಿ ಪ್ರಮುಖವಾದವೆಂದರೆ:
  • ಬಾಹ್ಯ ಪರಿಮಾಣಗಳಲ್ಲಿನ ಘಟನೆಗಳನ್ನು ಆಲಕ್ಷಿಸಿ, ಪರಿಮಾಣಗಳನ್ನು ಸೇರಿಸಿದಾಗ ಹಾಗು ತೆಗೆದಾಗ ಸರಿಯಾಗಿದೆಯೆ(ಸ್ಯಾನಿಟಿ) ಪರಿಶೀಲನೆಯನ್ನು ಸೇರಿಸಲಾಗಿದೆ.
  • ಚಾಲಕ ಈಗ ಸಾಂಪ್ರದಾಯಿಕ I/O ಪೋರ್ಟ್ ಫ್ರೀ ಆಗಿದೆ
  • ಹೈಬರ್ನೇಶನ್ ಸಮಯದಲ್ಲಿ ಅಥವ ಮರಳಿ ಆರಂಭಿಸಿವಾಗ ಕರ್ನಲ್ oops ಗೆ ಕಾರಣವಾಗುತ್ತಿದ್ದಂತಹ ಒಂದು ಸಮಸ್ಯೆಯನ್ನು ಈಗ ಸರಿಪಡಿಸಲಾಗಿದೆ.
LSI ಫ್ಯೂಶನ್ MPT
LSI Fusion MPT ಫರ್ಮ್-ವೇರನ್ನು ಬಳಸುವ ಸಾಧನಗಳಿಗಾಗಿ mptque ಮೂಲ ಚಾಲಕವನ್ನು ಆವೃತ್ತಿ 3.4.13rh ಗೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್‌ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ, ಅವುಗಳಲ್ಲಿ ಪ್ರಮುಖವಾದವೆಂದರೆ:
  • SCSI (SAS) ಟೊಪೊಲಾಜಿ ಸ್ಕ್ಯಾನ್‌ಗೆ ಲಗತ್ತಿಸಲಾದ ಒಂದು ಸರಣಿಯನ್ನು ಮರಳಿ ರಚಿಸಲಾಗಿದೆ, ಇದು ಎಕ್ಸ್‌ಪಾಂಡರ್, ಲಿಂಕ್ ಸ್ಟೇಟಸ್ ಹಾಗು ಹೋಸ್ಟ್ ಬಸ್ ಅಡಾಪ್ಟರ್ (HBA) ಘಟನೆಗಳನ್ನು ಒದಗಿಸುತ್ತದೆ.
  • SAS ಕೇಬಲ್ ಅನ್ನು ತೆಗೆದು ನಂತರ ಮರಳಿ ಹಾಕಿದಾಗ ನಡುನಡುವೆ ಉಂಟಾಗುತ್ತಿದ್ದಂತಹ ಸಮಸ್ಯೆಗಳನ್ನು ಈಗ ಸರಿಪಡಿಸಲಾಗಿದೆ.
  • SATA ಸಾಧನಗಳು ಭಿನ್ನವಾದ SAS ವಿಳಾಸಗಳನ್ನು ಪಡೆಯುತ್ತಿದ್ದಂತಹ ಸಮಸ್ಯೆಯನ್ನು ಸರಿಪಡಿಸಲಾಗಿದೆ.
  • ಸಾಧನ ಫರ್ಮ್-ವೇರ್ ಈಗ ಚಾಲಕಕ್ಕೆ ಸಂಪೂರ್ಣ ಸರತಿ (ಕ್ಯೂ ಫುಲ್) ಘಟನೆಯನ್ನು ವರದಿ ಮಾಡುತ್ತದೆ ಹಾಗು ಚಾಲಕವು SCSI ಮಿಡ್-ಲೇಯರ್ ಬಳಸಿಕೊಂಡು ಸಂಪೂರ್ಣ ಸರತಿ ಘಟನೆಯನ್ನು ನಿಭಾಯಿಸುತ್ತದೆ.
LSI MegaRAID SAS ನಿಯಂತ್ರಕಗಳು
LSI MegaRAID SAS ನಿಯಂತ್ರಕಗಳಿಗಾಗಿನ megaraid_sas ಚಾಲಕವನ್ನು ಆವೃತ್ತಿ 4.17-RH1 ಗೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ ಹಲವಾರು ಸಮಸ್ಯೆಗಳನ್ನು ಸರಿಪಡಿಸುತ್ತದೆ, ಅವುಗಳಲ್ಲಿ ಮುಖ್ಯವಾಗಿ:
  • ಫರ್ಮ್-ವೇರ್ ಬೂಟ್ ಆಗುವಾಗ ಹಾಗು ಆರಂಭಗೊಳ್ಳುವಾಗ ಇದ್ದತಹ ಒಂದು ಸಮಸ್ಯೆಯನ್ನು ಈಗ ಸರಿಪಡಿಸಲಾಗಿದೆ.
  • ಹೈಬರ್ನೇಶನ್ ಸಮಯದಲ್ಲಿ ಸಾಧನಗಳು ಸ್ಥಬ್ದಗೊಳ್ಳಲು ಕಾರಣವಾದಂತಹ ಒಂದು ಸಮಸ್ಯೆಯನ್ನು ಈಗ ಸರಿಪಡಿಸಲಾಗಿದೆ.
  • ಚಾಲಕವನ್ನು ಸೇರಿಸಿದಾಗ ಅಥವ ಅಳಿಸಿದಾಗ ಈಗ ಸಾಧನವು ತಾನಾಗಿಯೆ ಅಪ್‌ಡೇಟ್ ಆಗುತ್ತದೆ.
  • MegaRAID SAS ಚಾಲಕ ಈಗ ಸಾಂಪ್ರದಾಯಿಕ I/O ಪೋರ್ಟ್ ಫ್ರೀ ಆಗಿದೆ

5. ಕಡತವ್ಯವಸ್ಥೆ/ಶೇಖರಣೆಯ ವ್ಯವಸ್ಥಾಪನೆ

ಸುಧಾರಿತ CFQ I/O ಶೆಡ್ಯೂಲರ್ ಕಾರ್ಯಕ್ಷಮತೆ
ಕೆಲವೊಂದು ಅನ್ವಯಗಳು (ಉದಾ dump ಹಾಗು nfsd) ವಿವಿಧ ಪ್ರಕ್ರಿಯೆಗಳಿಗೆ ಹಾಗು ತ್ರೆಡ್‌ಗಳಿಗೆ I/O ಮನವಿಯನ್ನು ವಿತರಿಸುವ ಮೂಲಕ ಡಿಸ್ಕಿನ I/O ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತವೆ. ಆದರೆ, ಕಂಪ್ಲೀಟ್ಲಿ ಫೇರ್ ಕ್ಯೂ (CFQ) I/O ಶೆಡ್ಯೂಲರ್ ಅನ್ನು ಬಳಸುವಾಗ, ಈ ಅನ್ವಯದ ವಿನ್ಯಾಸವು I/O ಕಾರ್ಯಕ್ಷಮತೆಯ ಮೇಲೆ ಋಣಾತ್ಮಕವಾಗಿ ಕೆಲಸಮಾಡುತ್ತದೆ. Red Hat ಎಂಟರ್ಪ್ರೈಸ್ ಲಿನಕ್ಸ್ 5.5 ರಲ್ಲಿ, ಕರ್ನಲ್ ಈಗ ಪರಸ್ಪರ ಹೊಂದಿಕೊಳ್ಳುವ ಸರತಿಗಳನ್ನು (ಕ್ಯೂಸ್) ಪತ್ತೆ ಮಾಡಿ ಅವುಗಳನ್ನು ವಿಲೀನಗೊಳಿಸಬಲ್ಲದು. ಅಷ್ಟೆ ಅಲ್ಲದೆ, ಎಲ್ಲಿಯಾದರೂ ಸರತಿಗಳು(ಕ್ಯೂಸ್) ಪರಸ್ಪರ ಹೊಂದಿಕೊಳ್ಳುವುದನ್ನು ನಿಲ್ಲಿಸಿದಾಗ ಅದನ್ನು ಪತ್ತೆ ಮಾಡಿ ಅವುಗಳನ್ನು ಮತ್ತೆ ಪ್ರತ್ಯೇಕಿಸಬಲ್ಲದು.
ಹೊಸ GFS2 ಆರೋಹಣಾ ಆಯ್ಕೆ
ಈ ಅಪ್‌ಡೇಟ್‌ನಿಂದಾಗಿ errors= ಆರೋಹಣಾ ಆಜ್ಞಾ ಸಾಲಿನ ಆಯ್ಕೆಗಾಗಿ GFS2 ಬೆಂಬಲವನ್ನು ಒದಗಿಸುತ್ತದೆ, ಇದು ದೋಷನಿವಾರಣೆಯಲ್ಲಿ ನೆರವಾಗಬಹುದು. ಎಲ್ಲಿಯಾದರು ಒಂದು I/O ದೋಷ ಅಥವ ಮೆಟಾಡೇಟ ದೋಷವು ಕಂಡುಬಂದಲ್ಲಿ ಪೂರ್ವ ನಿಯೋಜಿತ ಆಯ್ಕೆಯಾದಂತಹ, errors=withdraw ಕಾರಣದಿಂದಾಗಿ ಕಡತವ್ಯವಸ್ಥೆಯು ಕ್ಲಸ್ಟರಿನಿಂದ ಹಿಂದಕ್ಕೆ ಪಡೆಯಲು ಪ್ರಯತ್ನಿಸುತ್ತದೆ. ಇದೇ ಸಂದರ್ಭದಲ್ಲಿ ಪರ್ಯಾಯವಾದಂತಹ, errors=panic ನ ಕಾರಣದಿಂದಾಗಿ ದಿಗಿಲು(ಪ್ಯಾನಿಕ್) ಸಂಭವಿಸುತ್ತದೆ. (BZ#518106)
CIFS ಅಪ್‌ಡೇಟ್
ಕಾಮನ್ ಇಂಟರ್ನೆಟ್ ಫೈಲ್ ಸಿಸ್ಟಮ್ (CIFS) ಅನ್ನು ಕರ್ನಲ್‌ನಲ್ಲಿ ಅಪ್‌ಡೇಟ್‌ ಮಾಡಲಾಗಿದೆ. (BZ#500838)

6. ಉಪಕರಣಗಳು

6.1. GNU ಪ್ರಾಜೆಕ್ಟ್ ಡೀಬಗ್ಗರ್ (GDB)

GNU ಪ್ರಾಜೆಕ್ಟ್ ಡೀಬಗ್ಗರ್ (ಸಾಮಾನ್ಯವಾಗಿ GDB ಎಂದು ಕರೆಯಲಾಗುತ್ತದೆ) ಎನ್ನುವುದು C, C++, ಹಾಗು ಇತರೆ ಭಾಷೆಗಳಲ್ಲಿ ಬರೆಯಲಾದ ಪ್ರೊಗ್ರಾಮ್‌ಗಳನ್ನು ಒಂದು ನಿಯಂತ್ರಿತ ವಿಧಾನದಲ್ಲಿ ಕಾರ್ಯಗತಗೊಳಿಸುವ ಮೂಲಕ, ಹಾಗು ನಂತರ ಅವುಗಳ ದತ್ತಾಂಶವನ್ನು ಮುದ್ರಿಸುವ ಮೂಲಕ ದೋಷ ನಿದಾನ ಮಾಡುತ್ತದೆ.
Red Hat ಎಂಟರ್ಪ್ರೈಸ್ ಲಿನಕ್ಸ್ 5.5 ರಲ್ಲಿ, GDB ಅನ್ನು ಆವೃತ್ತಿ 7.0.1 ಕ್ಕೆ ನವೀಕರಿಸಲಾಗಿದೆ. ಬದಲಾವಣೆಗಳ ಒಂದು ವಿವರವಾದ ಪಟ್ಟಿಗಾಗಿ ತಾಂತ್ರಿಕ ಟಿಪ್ಪಣಿಗಳಲ್ಲಿರುವ GDB ವಿಭಾಗವನ್ನು ನೋಡಿ.
ವರ್ಧಿತ C++ ಬೆಂಬಲ
GDB ಯಲ್ಲಿ C++ ಪ್ರೊಗ್ರಾಮಿಂಗ್ ಭಾಷೆಗಾಗಿನ ಬೆಂಬಲವನ್ನು ಸುಧಾರಿಸಲಾಗಿದೆ. ಗಮನಾರ್ಹವಾದ ಸುಧಾರಣೆಗಳೆಂದರೆ:
  • ಎಕ್ಸ್‌ಪ್ರೆಶನ್ ಪಾರ್ಸಿಂಗ್‌ಗೆ ಹಲವು ಸುಧಾರಣೆಗಳು.
  • ಟೈಪ್‌ ನೇಮ್‌ಗಳ ಉತ್ತಮ ಹ್ಯಾಂಡ್ಲಿಂಗ್.
  • ಅಗತ್ಯವಿಲ್ಲದೆ ಕೋಟ್‌ ಮಾಡುವಿಕೆಯನ್ನು ಹೆಚ್ಚು ಕಡಿಮೆ ತೆಗೆದು ಹಾಕಲಾಗಿದೆ
  • "next" ಹಾಗು ಇತರೆ ಸ್ಟೆಪ್ಪಿಂಗ್ ಆಜ್ಞೆಗಳ ಕೆಳಗಿರುವುದು ಒಂದು ಆಕ್ಷೇಪಣೆಯನ್ನು ತೋರಿಸಿದರೂ ಸಹ ಇವುಗಳು ಸರಿಯಾಗಿ ಕೆಲಸ ಮಾಡುತ್ತವೆ.
  • GDB ಒಂದು ಹೊಸ "catch syscall" ಆಜ್ಞೆಯನ್ನು ಹೊಂದಿದೆ. ಕೆಳಗಿನದು ಒಂದು ವ್ಯವಸ್ಥೆಯ ಕರೆಯನ್ನು (ಸಿಸ್ಟಮ್ ಕಾಲ್) ಮಾಡಿದಾಗ ಅದನ್ನು ನಿಲ್ಲಿಸಲು ಇದನ್ನು ಬಳಸಬಹುದಾಗಿದೆ.
ಅಗಲವಾದ ಹಾಗು ಅನೇಕ-ಬೈಟ್ ಚಿಹ್ನೆಯ ಬೆಂಬಲ
GDB ಯು ಈಗ ಗುರಿಯಲ್ಲಿ ಅಗಲವಾದ ಹಾಗು ಅನೇಕ-ಬೈಟ್ ಚಿಹ್ನೆಯ ಬೆಂಬಲವನ್ನು ಹೊಂದಿರುತ್ತದೆ.
ಸ್ವತಂತ್ರ ತ್ರೆಡ್ ದೋಷನಿದಾನ
ತ್ರೆಡ್ ಕಾರ್ಯಗತಗೊಳಿಸುವಿಕೆಯು ಈಗ ತ್ರೆಡ್‌ಗಳನ್ನು ಪ್ರತ್ಯೇಕವಾಗಿ ಹಾಗು ಒಂದೊಕ್ಕೊಂದು ಸ್ವತಂತ್ರವಾಗಿ ದೋಷನಿದಾನ ಮಾಡುವುದನ್ನು ಅನುಮತಿಸುತ್ತದೆ; ಹೊಸ ಸಂಯೋಜನೆಗಳಾದ "set target-async" ಹಾಗು "set non-stop" ಎನ್ನುವುದು ಶಕ್ತಗೊಂಡಿರುತ್ತದೆ.

6.2. SystemTap

SystemTap ಎನ್ನುವುದು ಬಳಕೆದಾರರು ಕಾರ್ಯವ್ಯವಸ್ಥೆಯ (ವಿಶೇಷವಾಗಿ, ಕರ್ನಲ್) ಚಟುವಟಿಕೆಗಳನ್ನು ಕೂಲಂಕುಶವಾಗಿ ಅಧ್ಯಯನ ನಡೆಸುವುದನ್ನು ಹಾಗು ಮೇಲ್ವಿಚಾರಣೆ ನಡೆಸುವುದನ್ನು ಅನುಮತಿಸುವ ಒಂದು ಜಾಡನ್ನು ಇರಿಸುವ ಹಾಗು ತನಿಖೆ ನಡೆಸುವ ಉಪಕರಣವಾಗಿದೆ. ಇದು netstat, ps, top, ಹಾಗು iostat ಗಳು ನೀಡುವ ರೀತಿಯಲ್ಲಿಯೆ ಔಟ್‌ಪುಟ್‌ಗಳನ್ನು ಒದಗಿಸುತ್ತದೆ; ಆದರೆ, SystemTap ಅನ್ನು ಸಂಗ್ರಹಿಸಲಾದ ಮಾಹಿತಿಯನ್ನು ಇನ್ನೂ ಹೆಚ್ಚಿನ ಫಿಲ್ಟರಿಂಗ್ ಹಾಗು ವಿಶ್ಲೇಷಣಾ ಆಯ್ಕೆಯನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಹೊಸ ಕರ್ನಲ್ ಟ್ರೇಸ್‌ಪಾಯಿಂಟ್‌ಗಳು
ಟ್ರೇಟ್‌ಪಾಯಿಂಟ್‌ಗಳು ಕರ್ನಲ್‌ನ ಪ್ರಮುಖ ವಿಭಾಗದಲ್ಲಿ ಇರಿಸಲಾಗಿದೆ, ಇದರಿಂದಾಗಿ ಗಣಕ ವ್ಯವಸ್ಥಾಪಕರು ಸಂಜ್ಞೆಯ(ಕೋಡ್) ಭಾಗದ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಿ, ಹಾಗು ದೋಷನಿದಾನವನ್ನು ನಡೆಸಲು ನೆರವಾಗುತ್ತದೆ. Red Hat ಎಂಟರ್ಪ್ರೈಸ್‌ ಲಿನಕ್ಸ್ 5.5 ರಲ್ಲಿ, ಕರ್ನಲ್‌ಗೆ ಒಂದು ದೊಡ್ಡ ವ್ಯಾಪ್ತಿಯ ಟ್ರೇಸ್‌ಪಾಯಿಂಟ್‌ಗಳನ್ನು ಸೇರಿಸಲಾಗಿದೆ (BZ#475710), ಇದರಲ್ಲಿ ಜಾಲಬಂಧ (BZ#475457), ಕೋರ್-ಡಂಪ್ (BZ#517115) ಹಾಗು ಸಂಕೇತಕ್ಕಾಗಿ(ಸಿಗ್ನಲ್) (BZ#517121) ಟ್ರೇಸ್‌ಪಾಯಿಂಟ್‌ಗಳನ್ನು ಒಳಗೊಂಡಿದೆ.

ಸೂಚನೆ

ಇದನ್ನು ಬಳಸಿಕೊಂಡು ಕರ್ನಲ್‌ನಲ್ಲಿನ ಟ್ರೇಸ್‌ಪಾಯಿಂಟ್‌ಗಳ ಒಂದು ಪಟ್ಟಿಯನ್ನು ಪಡೆಯಬಹುದಾಗಿದೆ:
 stap -L 'kernel.trace("*")'|sort
ಸವಲತ್ತಿಲ್ಲದ ಕ್ರಮ
ಈ ಮೊದಲು, ಕೇವಲ ನಿರ್ವಾಹಕ ಬಳಕೆದಾರರು ಮಾತ್ರ SystemTap ಅನ್ನು ಬಳಸುತ್ತಿದ್ದರು. ಈ ಅಪ್‌ಡೇಟ್‌ನಿಂದಾಗಿ SystemTap ನ ಸವಲತ್ತಿಲ್ಲದ ಕ್ರಮವನ್ನು ಪರಿಚಯಿಸಲಾಗುತ್ತಿದೆ, ಇದರಿಂದಾಗಿ ನಿರ್ವಾಹಕರೆಲ್ಲೆದೇ ಇರುವ ಬಳಕೆದಾರರೂ ಸಹ SystemTap ಅನ್ನು ಬಳಸಬಹುದಾಗಿರುತ್ತದೆ. ವಿವರವಾದ ಮಾಹಿತಿಯನ್ನು man stap-client ಮ್ಯಾನ್‌ಪೇಜ್‌ನಿಂದ ಪಡೆಯಬಹುದಾಗಿದೆ.

ಮಹತ್ವ

ಸವಲತ್ತಿಲ್ಲ ಕ್ರಮವನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ Red Hat ಎಂಟರ್ಪ್ರೈಸ್‌ ಲಿನಕ್ಸ್ 5.5 ರಲ್ಲಿ ನೀಡಲಾಗಿದೆ. ಇದಕ್ಕೆ ಅಗತ್ಯವಿರುವ stap-server ಸೌಕರ್ಯದಲ್ಲಿನ ಸುರಕ್ಷತೆಯನ್ನು ಸುಧಾರಿಸುವದರ ಮೇಲೆ ಕೆಲಸವು ನಡೆಯತ್ತಿದೆ ಹಾಗು ಒಂದು ನಂಬಿಕಾರ್ಹವಾದ ಜಾಲಬಂಧದಲ್ಲಿ ಎಚ್ಚರಿಕೆಯಿಂದ ನಿಯೋಜಿಸಬೇಕಿರುತ್ತದೆ.
C++ ತನಿಖೆ
C++ ಪ್ರೊಗ್ರಾಮ್ ತನಿಖೆಯಲ್ಲಿನ ಸುಧಾರಣೆಗಳು ಯೂಸರ್-ಸ್ಪೇಸ್ ಪ್ರೊಗ್ರಾಮ್‌ಗಳ ತನಿಖೆಯಲ್ಲಿಯೂ ಸಹ ಉತ್ತಮವಾಗಿ ಕೆಲಸಮಾಡುತ್ತದೆ.

6.3. Valgrind

Valgrind ಅನ್ನು ಮೆಮೊರಿಯನ್ನು ಓದುವಿಕೆ, ಬರೆಯುವಿಕೆ,ನಿಯೋಜನೆಯಂತಹ ಕೆಲಸಗಳಲ್ಲಿ ಮೇಲ್ವಿಚಾರಣೆ ಮಾಡಲು ಬಳಸಲಾಗುತ್ತದೆ. valgrind ಉಪಕರಣವನ್ನು ಹೆಚ್ಚಾಗಿ ವಿಕಸಗಾರರಿಂದ ಮೆಮೊರಿ ನಿರ್ವಹಣಾ ತೊಂದರೆಗಳಲ್ಲಿ ದೋಷವನ್ನು ಪತ್ತೆ ಮಾಡಲು ಹಾಗು ದೋಷನಿದಾನದ ಕಾರ್ಯಗಳಲ್ಲಿ ಬಳಸಲಾಗುತ್ತದೆ.
Valgrind ಅನ್ನು ಆವೃತ್ತಿ 3.5.0 ಕ್ಕೆ ಅಪ್‌ಡೇಟ್ ಮಾಡಲಾಗಿದ್ದು, ಇದು ದೊಡ್ಡ ವ್ಯಾಪ್ತಿಯ ವ್ಯವಸ್ಥೆ ಆರ್ಕಿಟೆಕ್ಚರುಗಳಿಗೆ ಹೆಚ್ಚಿದ ಬೆಂಬಲವನ್ನು ಒದಗಿಸುತ್ತದೆ. ಈ ಅಪ್‌ಡೇಟ್ Valgrind ನ ಕಾರ್ಯಕ್ಷಮತೆಗೆ, ಸ್ಕೇಲೆಬಿಲಿಟಿಗೆ ಹಾಗು ಬಳಕೆಗೆ ಹಲವಾರು ಸುಧಾರಣೆಗಳನ್ನು ಒದಗಿಸುತ್ತದೆ. ಮುಖ್ಯವಾಗಿ, Helgrind ಉಪಕರಣದ ಬಳಕೆ ಹಾಗು ಸ್ಕೇಲೆಬಿಲಿಟಿ — ಇದು ರೇಸ್ ಸ್ಥಿತಿಯನ್ನು ಪತ್ತೆ ಮಾಡಲು ಬಳಕೆಯಾಗುತ್ತದೆ — ಇವುಗಳನ್ನು ಸುಧಾರಿಸಲಾಗಿದೆ. Memcheck ಉಪಕರಣದ ಸೋರಿಕೆಯನ್ನು ಪರಿಶೀಲಿಸುವ ಸಾಮರ್ಥ್ಯವನ್ನು ಸುಧಾರಿಸಲಾಗಿದೆ. ಹೆಚ್ಚುವರಿಯಾಗಿ, DWARF ದೋಷನಿವಾರಣಾ ಮಾಹಿತಿಯನ್ನು ಹೆಚ್ಚಿಸಲಾಗಿದೆ.

7. ಗಣಕತೆರೆ ಅಪ್‌ಡೇಟ್‌ಗಳು

OpenOffice.org
OpenOffice.org ಎನ್ನುವುದು ಒಂದು ಮುಕ್ತ ಆಕರ, ಯಾವುದೆ ಪ್ಲಾಟ್‌ಫಾರ್ಮಿನಲ್ಲಿ ಹೊಂದಿಕೊಳ್ಳುವ ಆಫೀಸ್ ಕಾರ್ಯಗಳಲ್ಲಿ ಬಳಸಲಾಗುವ ಸೂಟ್ ಆಗಿದೆ. ಇದು ಪ್ರಮುಖ ಶಬ್ಧ ಸಂಸ್ಕಾರಕ(ವರ್ಡ್ ಪ್ರಾಸೆಸರ್), ಸ್ಪ್ರೆಡ್‌ಶೀಟ್, ಹಾಗು ಪ್ರಸ್ತುತಿ ವ್ಯವಸಸ್ಥಾಪಕದಂತಹ (ಪ್ರೆಸೆಂಟೇಶನ್ ಮ್ಯಾನೇಜರ್) ಗಣಕತೆರೆ ಅನ್ವಯಗಳನ್ನು ಹೊಂದಿದೆ. ಓಪನ್‌ ಆಫೀಸ್ ಅನ್ನು Microsoft Office 2007 OOXML ವಿನ್ಯಾಸಗಳಿಗೆ ಬೆಂಬಲ ನೀಡುವುದರ ಜೊತೆಗೆ ಹಲವಾರು ದೋಷ ಪರಿಹಾರಗಳು ಹಾಗು ಉತ್ತಮ ಸೌಕರ್ಯಗಳನ್ನು ಒದಗಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
Metacity
Metacity - GNOME ಗಣಕತೆರೆಯ ಪೂರ್ವನಿಯೋಜಿತವಾದ ವಿಂಡೊ ವ್ಯವಸ್ಥಾಪಕವಾದ ಇದನ್ನು ಅಪ್‌ಡೇಟ್ ಮಾಡಲಾಗಿದ್ದು, ಇದರಿಂದಾಗಿ ಈಗ ಇದು ಇನ್ನೂ ಉತ್ತಮಗೊಂಡಿರುವುದರ ಜೊತೆಗೆ, metacityಯ ವರ್ತನೆಯನ್ನು ನಿಯಂತ್ರಿಸಲು ಹೆಚ್ಚುವರಿ GConf ಕೀಲಿಗಳು ಹಾಗು ದೋಷ ಪರಿಹಾರಗಳನ್ನು ಹೊಂದಿದೆ.

8. ಹೊಸ ಪ್ಯಾಕೇಜುಗಳು

FreeRADIUS
FreeRADIUS ಒಂದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ, ಸುಲಭವಾಗಿ ಸಂರಚಿಸಬಹುದಾದ, ಉಚಿತವಾದ ದೂರಸ್ಥ ದೃಢೀಕರಣ ಡಯಲ್ ಇನ್ ಬಳಕೆದಾರ ಸೇವೆಯ (RADIUS) ಪರಿಚಾರಕವಾಗಿದೆ. ಇದನ್ನು ಒಂದು ಜಾಲಬಂಧದಲ್ಲಿ ಕೇಂದ್ರೀಕೃತವಾದ ದೃಢೀಕರಣ ಹಾಗು ಅಧಿಕಾರ ನೀಡಿಕೆಯನ್ನು ಅನುಮತಿಸುವಂತೆ ವಿನ್ಯಾಸಗೊಳಿಸಲಾಗಿದೆ.
FreeRADIUS 2.0 ಈಗ (freeradius2) Red Hat ಎಂಟರ್ಪ್ರೈಸ್‌ ಲಿನಕ್ಸ್ 5.5 ರಲ್ಲಿ ಒಂದು ಹೊಸ ಪ್ಯಾಕೇಜ್ ಆಗಿ ಲಭ್ಯವಿದೆ. FreeRADIUS 1 ಈಗಲೂ ಸಹ Red Hat ಎಂಟರ್ಪ್ರೈಸ್‌ ಲಿನಕ್ಸ್ 5 ರಲ್ಲಿ ಮೂಲ freeradius ಪ್ಯಾಕೇಜಿನ ಹೆಸರಿನಲ್ಲಿ ಲಭ್ಯವಿದೆ. FreeRADIUS ನ ಆವೃತ್ತಿ 2.0 ಯು ಪ್ರೊಗ್ರಾಮಿಂಗ್ ಭಾಷೆಯೂ ಸೇರಿದಂತೆ unlang, ವರ್ಚುವಲ್ ಪರಿಚಾರಕ ಬೆಂಬಲ, ಸುಧಾರಿತ RFC ವ್ಯಾಪ್ತಿಗಾಗಿ ಹೆಚ್ಚುವರಿ ಕೋಶಗಳು ಹಾಗು ಗುಣವಿಶೇಷಗಳು ಮತ್ತು ಜಾಲಬಂಧ ಪ್ಯಾಕೇಟ್‌ಗಳಿಗಾಗಿ ಸಂಪೂರ್ಣ IPv6 ಬೆಂಬಲದ ಸೌಕರ್ಯವನ್ನು ಒದಗಿಸುತ್ತದೆ.

ಮಹತ್ವ

freeradius ಹಾಗು freeradius2 ಪ್ಯಾಕೇಜುಗಳು ಒಂದೇ ಕಡತಗಳನ್ನು ಹಂಚಿಕೊಳ್ಳುತ್ತವೆ, ಹಾಗು ಒಂದೇ ವ್ಯವಸ್ಥೆಯಲ್ಲಿ ಎರಡನ್ನೂ ಅನುಸ್ಥಾಪಿಸಲು ಸಾಧ್ಯವಿರುವುದಿಲ್ಲ.
PostgreSQL 8.4
PostgreSQL 8.4 (postgresql84) ಈಗ Red Hat ಎಂಟರ್ಪ್ರೈಸ್‌ ಲಿನಕ್ಸ್ 5 ರಲ್ಲಿ ಸಂಪೂರ್ಣ ಬೆಂಬಲಿತವಾದ ಆಯ್ಕೆಯಾಗಿ ಸೇರಿಸಲಾಗಿದೆ. PostgreSQL 8.4 ರಲ್ಲಿನ ಹೊಸ ಸವಲತ್ತುಗಳೆಂದರೆ: ಸಮಾನಾಂತರವಾಗಿ ದತ್ತಸಂಚಯವನ್ನು ಮರಳಿ ಸ್ಥಾಪಿಸುವಿಕೆ, ಪ್ರತಿ ಲಂಬಸಾಲಿನ ಅನುಮತಿಗಳು ಹಾಗು ಮೇಲ್ವಿಚಾರಣೆಯ ಹೊಸ ಉಪಕರಣಗಳು.

ಮಹತ್ವ

ಈಗಿರುವ PostgreSQL 8.1 ಇಂದ (postgres ಪ್ಯಾಕೇಜ್‌ನಿಂದ ಒದಗಿಸಲಾಗಿದ್ದು) ವರ್ಗಾವಣೆ ಮಾಡಲು pg_dump ಬಳಸಿಕೊಂಡು ಒಂದು ದತ್ತಾಂಶ ಬಿಸುಡು(ಡಂಪ್) ಹಾಗು ಪುನಶ್ಚೇತನಗೊಳಿಕೆಯ ಅಗತ್ಯವಿರುತ್ತದೆ. ಈ ಅಗತ್ಯತೆಯ ಕಾರಣದಿಂದಾಗಿ, postgres ಹಾಗು postgresql84 ಪ್ಯಾಕೇಜ್ ಮಟ್ಟದ ಅಸಮಂಜಸತೆಗಳನ್ನು ಹೊಂದಿರುತ್ತದೆ ಹಾಗು ಒಂದು ವ್ಯವಸ್ಥೆಯಲ್ಲಿ ಕೇವಲ ಒಂದೇ ಆವೃತ್ತಿಯನ್ನು ಅನುಸ್ಥಾಪಿಸಲು ಸಾಧ್ಯವಿರುತ್ತದೆ.
Samba
Samba ಎನ್ನುವುದು ಗಣಕಗಳು ಕಡತಗಳನ್ನು ಹಂಚಿಕೊಳ್ಳಲು, ಮುದ್ರಕಗಳಿಗಾಗಿ ಹಾಗು ಇತರೆ ಮಾಹಿತಿಗಾಗಿ ಬಳಸಲಾಗುವ ಪ್ರೊಗ್ರಾಮ್‌ಗಳ ಒಂದು ಸೂಟ್ ಆಗಿದೆ.
Samba3x ಅನ್ನು ಮೊದಲು 5.4 ಬಿಡುಗಡೆಯಲ್ಲಿ x86_64 ಪೂರಕವಾಗಿ ಒದಗಿಸಲಾಗಿತ್ತು. Red Hat ಎಂಟರ್ಪ್ರೈಸ್‌ ಲಿನಕ್ಸ್ 5.5 ರಲ್ಲಿ, Samba3x ಅನ್ನು ಅಪ್‌ಡೇಟ್ ಮಾಡಲಾಗಿದೆ ಹಾಗು ಈಗ ಎಲ್ಲಾ ಆರ್ಕಿಟೆಕ್ಚರುಗಳಲ್ಲಿಯೂ ಇದಕ್ಕೆ ಬೆಂಬಲವಿದೆ. Samba3x Microsoft® Windows™ 7 ಸಹವರ್ತನೀಯತೆಯ ಬೆಂಬಲವನ್ನು ಹೊಂದಿದೆ.

ಮಹತ್ವ

ಕ್ಲಸ್ಟರ್ ಮಾಡಲಾದ Samba ಬೆಂಬಲವು ಇನ್ನೂ ಸಹ ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ ಹಾಗು ಕೇವಲ x86_64 ಆರ್ಕಿಟೆಕ್ಚರಿನಲ್ಲಿ ಮಾತ್ರ ಲಭ್ಯವಿದೆ.
Samba3x ಯು ಅಪ್‌ಸ್ಟ್ರೀಮ್‌ Samba 3.3 ಬಿಡುಗಡೆಗೆ ಆಧರಿತವಾಗಿದೆ ಹಾಗು ಇದು ಸಂರಚನಾ ಕಡತ ಆಯ್ಕೆಗಳಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಒಳಗೊಂಡಿರುತ್ತದೆ:
ನಿಯತಾಂಕ ವಿವರಣೆ ಪೂರ್ವನಿಯೋಜಿತ
cups ಸಂಪರ್ಕದ ಕಾಲಾವಧಿ ತೀರಿಕೆ ಹೊಸ 30
idmap config DOM:range ತೆಗೆದುಹಾಕಲಾಗಿದೆ  
idmap ಡೊಮೈನ್‌ಗಳು ತೆಗೆದುಹಾಕಲಾಗಿದೆ  
init ಲಾಗಾನ್ ಆತಿಥೇಯಗಳನ್ನು ವಿಳಂಬ ಮಾಡಿದೆ ಹೊಸ ""
init ಲಾಗಾನ್ ವಿಳಂಬ ಹೊಸ 100
ldap ssl ಬದಲಾಯಿಸಲಾದ ಪೂರ್ವನಿಯೋಜಿತ tls ಅನ್ನು ಆರಂಭಿಸು
ಹಂಚಿಕಾ ಕ್ರಮಗಳು ಬಳಕೆಯಲ್ಲಿರದ  
winbind ಮರಳಿ ಸಂಪರ್ಕಜೋಡಿಸುವಲ್ಲಿ ವಿಳಂಬ ಹೊಸ 30
libsmbclient ಪ್ಯಾಕೇಜನ್ನು ಉತ್ಪಾದಿಸುವಂತೆ samba ಆಕರ ಘಟಕವನ್ನು ರೀಫ್ಯಾಕ್ಟರ್ ಮಾಡಲಾಗಿದೆ. libsmbclient ಅನ್ನು ಪರಿಸರದಲ್ಲಿನ ಇತರೆ ಘಟಕಗಳಿಗೆ ಕ್ಲೈಂಟ್ ಸಂಪರ್ಕಸಾಧನಗಳನ್ನು ಒದಗಿಸುವಂತೆ samba ಹಾಗು samba3x ಎರಡೂ ಪ್ಯಾಕೇಜುಗಳಲ್ಲಿಯೂ ಸಹ ಸೇರಿಸಲಾಗಿದೆ

ಮಹತ್ವ

Samba3x ಅನ್ನು ಅನುಸ್ಥಾಪಿಸುವ ಮೊದಲು ಹಿಂದಿನ ಎಲ್ಲಾ samba3x ತಂತ್ರಜ್ಞಾನ ಮುನ್ನೋಟ ಪ್ಯಾಕೇಜುಗಳನ್ನು ತೆಗೆದು ಹಾಕಬೇಕು.
gPXE
Red Hat ಎಂಟರ್ಪ್ರೈಸ್‌ ಲಿನಕ್ಸ್ 5.5 ಹೊಸ gPXE ಪ್ಯಾಕೇಜನ್ನು ಪರಿಚಯಿಸುತ್ತದೆ, ಇದು ಒಂದು ಮುಕ್ತ ಆಕರ Preboot eXecution Environment (PXE) ಅನ್ವಯಿಕವಾಗಿದೆ. ಜಾಲಬಂಧದ ಸಂಪರ್ಕದ ಮೂಲಕ ಅನುಸ್ಥಾಪನಾ ಚಿತ್ರಿಕೆಗಳನ್ನು ಬೂಟ್‌ ಮಾಡುವ ಸಾಮರ್ಥ್ಯವನ್ನು ಈ gPXE ಒದಗಿಸುತ್ತದೆ.

A. ಪುನರಾವರ್ತನೆಯ ಇತಿಹಾಸ

ಪುರಾವೃತ್ತ ಪರಿಷ್ಕರಣೆ
ಪರಿಷ್ಕರಣೆ 0Tue Nov 24 2009Ryan Lerch
publican ಬಳಸಿಕೊಂಡು ಆರಂಭದಲ್ಲಿ ರಚಿಸಿದ್ದು